Cormorant1_flip.jpg

Best of Gundmi Wildlife

ಗುಂಡ್ಮಿಯಲ್ಲಿ ಕಾಣಸಿಗುವ ಕೆಲವು ಸುಂದರ ವನ್ಯ ಜೀವನಗಳು ಇಲ್ಲಿವೆ 

Handpicked examples of wildlife found in Gundmi

ನೀರು ಕಾಗೆ Indian Cormorant

ನೀರು ಕಾಗೆ Indian Cormorant

ನೀರು ಕಾಗೆಗಳು ಮಳೆಗಾಲದಲ್ಲಿ ಸುಲಭವಾಗಿ ನೋಡಲು ಸಿಗುತ್ತವೆ. ಎತ್ತರದ ಮರಗಳ ಮೇಲೆ ಮತ್ತು ಗದ್ದೆಗಳ ಅಂಚಿನಲ್ಲಿ ಕುಳಿತು ಬಿಸಿಲು ಕಾಯಿಸುತ್ತಾ ಇರುವ ಈ ಹಕ್ಕಿಗಳನ್ನು ಗುರುತಿಸುವುದು ಬಹಳ ಸುಲಭ. ಗುಂಡ್ಮಿಯ ಸಿಗಡಿ ಗುಂಡಿಗಳಲ್ಲಿ ಯಾವಾಗಲು ನೋಡಲು ಸಿಗುತ್ತವೆ.

Cormorants are plenty in Gundmi. They can be seen drying out their wings on top of tall trees or edges of paddy fields. It is a pleasure to watch them dive into shallow waters to catch their prey and swallow them. They are not easily frightened by people​,​ especially when they are perched on tall trees.

ಗೀಜಗ Baya weaverbirds

ಗೀಜಗ Baya weaverbirds

ಗೀಜಗನ ಹಕ್ಕಿಗಳ ಫೋಟೋ ತೆಗೆಯುವುದು ಸ್ವಲ್ಪ ಗಡಿಬಿಡಿಯ ಕೆಲಸ! ಯಾವಾಗಲು ಆ ಕಡೆ ಈ ಕಡೆ ಹಾರುತ್ತಿರುವ ಈ ಚಿಕ್ಕ ಹಕ್ಕಿಗಳು ಬಹಳ ಶಬ್ಧ ಮಾಡುತ್ತವೆ. ತಾಳೆ ಮತ್ತು ತೆಂಗಿನ ಮರಗಳಲ್ಲಿ ಗೂಡು ಕಟ್ಟುತ್ತವೆ. ಗಂಡು ಹಕ್ಕಿಗಳು ಅರಸಿನ ಬಣ್ಣ, ಹೆಣ್ಣುಗಳು ಬೂದು ಬಣ್ಣ. ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತವೆ.

Baya weaverbirds are typically found in Gundmi during ​m​onsoon. They build their nest​s​ on palm and coconut trees, and many can be seen hanging from the trees at the same time. They are very agile and noisy birds. It takes quite an effort to photograph​ them​, given their constant movement.

ನೀರುನಾಯಿ Smooth-coated Otter

ನೀರುನಾಯಿ Smooth-coated Otter

ನೀರು ನಾಯಿಗಳು ಗುಂಡ್ಮಿಯಲ್ಲಿ ಕಾಣಿಸದೆ ಬಹಳ ವರ್ಷಗಳೇ ಆಗಿದ್ದವು ಎಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರುನಾಯಿಗಳು ಪಡುಕೆರೆ ಹೊಳೆಯ ಆಸುಪಾಸಿನಲ್ಲಿ ಕಾಣಸಿಗುತ್ತಿವೆ!

ಹೊಳೆತೀರದಲ್ಲಿ ಕುಳಿತು ಹಕ್ಕಿಗಳಿಗೆ ಕಾಯುತಿದ್ದ ನನಗೆ ನೀರುನಾಯಿ ನೋಡಿ ಬಹಳ ಆಶ್ಚರ್ಯ ಆಯಿತು. ಒಮ್ಮೆ ಮಾತ್ರ ನೋಡಲು ಸಿಕ್ಕಿರುವ ಈ ಪ್ರಾಣಿಗಳಿಗಾಗಿ ನಾನು ಸಮಯ ಸಿಕ್ಕಾಗ ಯಾವಾಗಲು ಹೊಳೆಯ ಕಡೆಗೆ ಹೋಗುತ್ತಾ ಇರುವೆನು!

Smooth-coated otters are a rare sight here in Gundmi. They haven’t been spotted for years but ​ have been making a comeback in the recent years. They are a vulnerable species, found in and around the backwater​s​.

ಗೂಬೆ Brown hawk-owl

ಗೂಬೆ Brown hawk-owl

ಗೂಬೆಗಳ ಜಾತಿಗೆ ಸೇರುವ ಈ ಹಿಂಸ್ರಪಕ್ಷಿ ನೋಡಲು ಸಿಗುವುದು ಬಹಳ ಅಪರೂಪ. ದಟ್ಟವಾಗಿ ಬೆಳೆದಿರುವ ಮರಗಳಲ್ಲಿ ಇರುವ ಈ ಗೂಬೆಗಳು ಸಂಜೆ ಮತ್ತು ರಾತ್ರಿ ಹೊತ್ತಿನಲ್ಲಿ ಆಹಾರ ಹುಡುಕುತ್ತವೆ. ಒಮ್ಮೆ ಮಾತ್ರ ನೋಡಲು ಸಿಕ್ಕಿದೆ.

These hawk-owls are very nocturnal, and it was a chance that I spotted them in a thick ​ ​wooded area. So far, ​I haven't had such luck again!

ಗುಲಾಬಿಕೊರಳಿನ ಗಿಳಿ Rose-ringed Parakeet

ಗುಲಾಬಿಕೊರಳಿನ ಗಿಳಿ Rose-ringed Parakeet

ಯಾವಾಗಲೂ ಎತ್ತರದ ಮರಗಳ ಮೇಲೆ ಕುಳಿತಿರುವ ಈ ಗಿಳಿಗಳನ್ನು ದೂರದಿಂದ ಗುರುತಿಸುವುದು ಅಸಾಧ್ಯವೇ ಸರಿ. ಹಣ್ಣುಗಳನ್ನು ತಿನ್ನಲು ಕೆಲವೊಮ್ಮೆ ಬರುತ್ತವೆ. ಹಾರುವಾಗ ಗಟ್ಟಿ ಶಬ್ದ ಮಾಡುತ್ತವೆ.

These parakeets are hard to spot amid the greenery. Typically found on tall trees, they do come down to feast on fruits. Very noisy when they fly around.

ರಂಗು ಉಲ್ಲಂಕಿ Greater painted-snipe

ರಂಗು ಉಲ್ಲಂಕಿ Greater painted-snipe

ಮಳೆಗಾಲದಲ್ಲಿ ಗುಂಡ್ಮಿಗೆ ಬರುವ ಈ ಹಕ್ಕಿಗಳು, ಭತ್ತದ ಗದ್ದೆಗಳ ನೀರಿನಲ್ಲಿ ಆಹಾರವನ್ನು ಹುಡುಕುತ್ತಿರುತ್ತವೆ. ಕಂದು ಬಣ್ಣದ ಈ ಪಕ್ಷಿಗಳನ್ನು ಸುಲಭವಾಗಿ ಗುರುತಿಸುವುದು ಸ್ವಲ್ಪ ಕಷ್ಟ! ಹೆಣ್ಣು ಮತ್ತು ಗಂಡು ಹಕ್ಕಿಗಳ ಬಣ್ಣ ಬೇರೆ ಬೇರೆ.
ಸೂರ್ಯನ ಬೆಳಕಿರದ ಸಂಜೆಯ ಹೊತ್ತಿನಲ್ಲಿ ನೋಡಲು ಸಿಗುತ್ತಿದ್ದುದರಿಂದ ನನಗೆ ಈ ಹಕ್ಕಿಗಳ ಫೋಟೋ ತೆಗೆಯಲು ಸುಮಾರು ವಾರಗಳೇ ಬೇಕಾದವು!

ಕನ್ನಡದಲ್ಲಿ ಹೆಸರು ತಪ್ಪಾಗಿ ಇರಬಹುದು, ನಿಮಗೆ ಗೊತ್ತಿದ್ದಲ್ಲಿ ದಯಮಾಡಿ ತಿಳಿಸಿ!

Greater painted-snipes are monsoon visitors to Gundmi. They are typically found in shallow watered paddy fields, wading to find their food. Unless one gets close to the bird, they are hard to spot and typically fly away quickly. It took a good week for me to photograph these beautiful creatures.

ಸುವರ್ಣ ಬೆನ್ನಿನ ಮರಕುಟಿಕ Black-rumped Flameback

ಸುವರ್ಣ ಬೆನ್ನಿನ ಮರಕುಟಿಕ Black-rumped Flameback

ಮರಕುಟಿಕಗಳು ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಒಣಗಿ ಹೋದ ಮರಗಳು, ತೆಂಗಿನ ಮರಗಳಲ್ಲಿ ಕೊಕ್ಕಿನಿಂದ ಬಡಿದು ಆಹಾರ ಹುಡುಕುತ್ತವೆ. ಈ ಹಕ್ಕಿಗಳು ಹಾರುವುದನ್ನು ನೋಡಲು ಸುಂದರ.

Woodpeckers are quite common and can be seen on coconut trees and dried/dead trees usually. They make quite the noise when they dig up the tree branches for food!

ಸಿಂಪಿಗ Common Tailorbird

ಸಿಂಪಿಗ Common Tailorbird

ಚೀಪ್ ಚೀಪ್ ಎಂದು ಶಬ್ದ ಮಾಡುವ ಈ ಪುಟ್ಟ ಹಕ್ಕಿಗಳು ಬಹಳ ಸಾಮಾನ್ಯ. ಎಲೆಗಳನ್ನು ಹೊಲಿದು ಗೂಡು ಕಟ್ಟುತ್ತವಂತೆ, ಆದರೆ ಒಮ್ಮೆಯೂ ಇದರ ಗೂಡು ನೋಡಲು ಸಿಕ್ಕಿಲ್ಲ! ಹೂವಿನ ಗಿಡಗಳು, ಪೊದೆಗಳಲ್ಲಿ ಆಹಾರ ಹುಡುಕುತ್ತಿರುತ್ತವೆ.

Tailorbirds are small birds, very common here in Gundmi. They make loud ‘cheep, cheep’ noise and usually found among small bushes and flowering​ plants.

 ಮಲೆ ದಾಸ ಮುಂಗಟ್ಟೆ Malabar pied hornbill

ಮಲೆ ದಾಸ ಮುಂಗಟ್ಟೆ Malabar pied hornbill

ಮಂಗಟ್ಟೆ ಹಕ್ಕಿಗಳು ಮಳೆಗಾಲಕ್ಕೆ ಗುಂಡ್ಮಿಗೆ ಬಂದ ತಕ್ಷಣ ಎಲ್ಲರಿಗು ತಿಳಿದು ಬರುತ್ತದೆ! ದೊಡ್ಡ ಸ್ವರದಲ್ಲಿ ಕೂಗುವ ಈ ಹಕ್ಕಿಗಳು ಗುಂಪು ಗುಂಪಾಗಿ ಎತ್ತರದ ಮರಗಳ ಮೇಲೆ ಕುಳಿತಿರುತ್ತವೆ. ಈ ಹಕ್ಕಿಗಳು ಹಾರುವುದನ್ನು ನೋಡಲು ಸುಂದರ. ಮಳೆ ಕೋಗಿಲೆ ಎಂದೂ ಕರೆಯುತ್ತೇವೆ!

Hornbills are monsoon visitors that stay ​in​ Gundmi throughout the rains. They signal their arrival with loud sounds. ​They typically perch on tall trees, ​and also have a beautiful flying pattern.

ನವಿಲು Indian Peacock

ನವಿಲು Indian Peacock

ವರ್ಷದ ಎಲ್ಲಾ ಋತುವಿನಲ್ಲೂ ನೋಡಲು ಸಿಗುವ ನವಿಲುಗಳ ಸಂಖ್ಯೆ ಇತ್ತೀಚಿಗೆ ಜಾಸ್ತಿಯಾಗುತ್ತಿದೆ ಎಂದು ಹೇಳುತ್ತಾರೆ ಗುಂಡ್ಮಿಯ ಜನರು. ಕಾಂಡ್ಲದ ಕಾಡಿನಲ್ಲಿ ಹೆಚ್ಚಾಗಿ ಇವೆ. ಮಳೆಗಾಲದಲ್ಲಿ ಗಂಡು ನವಿಲುಗಳ ಸುಂದರ ನೃತ್ಯ ಯಾವಾಗಲು ನೋಡಲು ಸಿಗುವುದು.

ಸಂಜೆ ಹೊತ್ತಿನಲ್ಲಿ ದೊಡ್ಡ ಸ್ವರದಲ್ಲಿ ಕೂಗುತ್ತವೆ, ತೆಂಗು ಮತ್ತಿತರ ಎತ್ತರದ ಮರಗಳ ಮೇಲೆ ಯಾವಾಗಲು ಕುಳಿತುಕೊಂಡಿರುತ್ತವೆ. ಕೆಲವೊಮ್ಮೆ ಎರಡು ಗಂಡು ನವಿಲುಗಳು ಹೊಡೆದಾಡಿಕೊಳ್ಳುವುದೂ ನೋಡಲು ಸಿಕ್ಕಿದೆ!

Peafowl are plenty and can be seen all year long here in Gundmi. They live in the mangrove forest on the riverbank. They make loud calls and ​are ​usually perched on tall coconut trees.

Peacocks dance frequently during ​the monsoon season, and I’ve seen adult males fighting for territory as well!

ಚಿಕ್ಕ ಬಕ Little Heron

ಚಿಕ್ಕ ಬಕ Little Heron

ಹೆಸರು ಚಿಕ್ಕ ಬಕ ಎಂದು ಇದ್ದರೂ ಈ ಹಕ್ಕಿಗಳು ನೋಡಲು ಕಾಗೆಯಷ್ಟು ದೊಡ್ಡದಿವೆ. ಕೆರೆ, ಹೊಳೆ, ಭತ್ತದ ಗದ್ದೆಗಳ ಸುತ್ತ ಮುತ್ತ ನೋಡಲು ಸಿಗುತ್ತವೆ. ಇವುಗಳ ಸಂಖ್ಯೆ ಜಾಸ್ತಿ ಇದ್ದರೂ ಹತ್ತಿರದಿಂದ ನೋಡಲು ಸಿಗುವುದು ಅಪರೂಪ.

Little herons can be found near small ponds, river and paddy fields during monsoon. Although they are common, it is rare to see them up close.

ನೇರಳೆ ಸೂರಕ್ಕಿ Purple sunbird

ನೇರಳೆ ಸೂರಕ್ಕಿ Purple sunbird

ಗುಂಡ್ಮಿಯಲ್ಲಿ ಹೂವಿನ ಗಿಡಗಳು ಇದ್ದಲ್ಲೆಲ್ಲಾ ಈ ಸೂರಕ್ಕಿಗಳು ಕಾಣಸಿಗುತ್ತವೆ. ಗಿಡದಿಂದ ಗಿಡಕ್ಕೆ, ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುವ ಈ ಹಕ್ಕಿಗಳು ನೋಡಲು ಸುಂದರ.

These sunbirds fly from flower to flower, plant to plant ​,​ sucking the nectar from flowers. They can be easily spotted among the flowering plants.

ಸಣ್ಣ ನೀಲಿ ಚಿಟ್ಟೆ  Small Blue Butterfly

ಸಣ್ಣ ನೀಲಿ ಚಿಟ್ಟೆ Small Blue Butterfly

ಚಿಟ್ಟೆಗಳು ಎಲ್ಲೆಲ್ಲಿಯೂ ನೋಡಲು ಸಿಗುತ್ತವೆ. ಅನೇಕ ಜಾತಿಯ, ಬಣ್ಣ ಬಣ್ದದ ಚಿಟ್ಟೆಗಳು ಮಳೆಗಾಲದಲ್ಲಿ ಜಾಸ್ತಿ. ಅವುಗಳಲ್ಲಿ ಇದೊಂದು ಪುಟ್ಟ ನೀಲಿ ಬಣ್ಣದ ಚಿಟ್ಟೆ.

There are ​plenty of butterflies here in Gundmi. Their number increases during monsoon. This small specimen is just one of many beautiful, colourful butterflies.

ನೀರು ಹುಂಡುಕೋಳಿ Watercock

ನೀರು ಹುಂಡುಕೋಳಿ Watercock

ಮಳೆಗಾಲದಲ್ಲಿ ಗದ್ದೆಗಳಲ್ಲಿ ಅಡಗಿಕೊಂಡಿರುವ ಈ ಹಕ್ಕಿಗಳು ನೋಡಲು ಸಿಗುವುದು ಬಹಳ ಕಷ್ಟ. ಇವುಗಳ ಕನ್ನಡದ ಹೆಸರು ನಾನು ತಪ್ಪಾಗಿ ಬರೆದಿರಬಹುದು. ನಿಮಗೆ ಸರಿಯಾದ ಹೆಸರು ಗೊತ್ತಿದ್ದಲ್ಲಿ ದಯಮಾಡಿ ನನಗೆ ತಿಳಿಸಿ!

Watercocks are hard to spot. They are ​m​onsoon visitors and usually fly away at the first sign of trouble. They usually hide in the grass ​(​paddy​)​ and search for their food.

 ಸೂರ್ಯನ ಕುದುರೆ Praying Mantis

ಸೂರ್ಯನ ಕುದುರೆ Praying Mantis

ಗುಂಡ್ಮಿಯ ಪರಿಸರದಲ್ಲಿ ಕೀಟಗಳು ಅನೇಕ. ಹಲವಾರು ಜಾತಿಗಳ ಕೀಟಗಳು ಯಾವಾಗಲು ಕಾಣಸಿಗುತ್ತವೆ. ಬಣ್ಣ ಬಣ್ಣಗಳ ಕೀಟಗಳನ್ನು ಹತ್ತಿರದಿಂದ ನೋಡಿದರೆ ಅನ್ಯ ಗ್ರಹಗಳ ಜೀವಿಗಳಿರುವಂತೆ ಕಾಣಿಸುತ್ತವೆ! ಈ ಸೂರ್ಯನ ಕುದುರೆ ಎನ್ನುವ ಕೀಟ ತರಕಾರಿ ಗಿಡಗಳ ಮೇಲೆ ಜಾಸ್ತಿ ನೋಡಲು ಸಿಗುತ್ತವೆ. 

ಸಿಂಪಿಗ Common Tailorbird

ಸಿಂಪಿಗ Common Tailorbird

ಬರಿ ಕಣ್ಣಿಗೆ ನೋಡಲು ಸಿಗದ ವಿವರಗಳನ್ನು ಫೋಟೋಗ್ರಫಿ ನೋಡಲು ಸಿಗುವಂತೆ ಮಾಡುತ್ತದೆ. ಈ ಪುಟ್ಟ ದರ್ಜಿ ಹಕ್ಕಿಯ ಮೈ ಬಣ್ಣ, ಪುಕ್ಕಗಳ ವಿವರಗಳನ್ನು ನೋಡಿ

Photography lets us see the details on these small birds which otherwise won’t be possible! Just look at those details on the feathers!

ಕಪ್ಪು ಬಿಳಿ ಮಿಂಚುಳ್ಳಿ Pied Kingfisher

ಕಪ್ಪು ಬಿಳಿ ಮಿಂಚುಳ್ಳಿ Pied Kingfisher

ಈ ಸುಂದರ ಕಪ್ಪು ಬಿಳಿ ಮಿಂಚುಳ್ಳಿ ಗುಂಡ್ಮಿಯ ಹೊಳೆ ಹತ್ತಿರ ಮಾತ್ರ ನೋಡಲು ಸಿಕ್ಕಿದೆ. ಇವು ಮೀನು ಹಿಡಿಯುವ ವಿಧಾನ ಬೇರೆ ಮಿಂಚುಳ್ಳಿಗಳಿಗಿಂತ ಭಿನ್ನ. ಈ ಮಿಂಚುಳ್ಳಿ ಗಾಳಿಯಲ್ಲಿ ಸುಳಿದಾಡಿ, ಒಂದೇ ಕಡೆ ರೆಕ್ಕೆ ಬಡಿಯುತ್ತ ನಿತ್ತು , ಮೀನುಗಳಿಗೆ ಗುರಿಯಿಟ್ಟು ನಂತರ ವೇಗವಾಗಿ ನೀರಿನಲ್ಲಿ ಮುಳುಗಿ ಮೀನು ಹಿಡಿಯುತ್ತವೆ. ನೋಡಲು ಬಹಳ ಆಕರ್ಷಕ.

Pied ​kingfishers have a different style with which they catch their fishes. They hover above the river ​surface​, aim​, then​ dive into water​​ with precise accuracy and catch their prey. I’ve seen these cute little birds only on the banks of the backwater river.

ನೀರು ಹುಳ Water skipper

ನೀರು ಹುಳ Water skipper

ನಿಂತಲ್ಲಿ ನಿಲ್ಲದ ಈ ನೀರಿನ ಕೀಟಗಳು ಬಾವಿಗಳಲ್ಲಿ, ಕೆರೆಗಳಲ್ಲಿ ಕಾಣಸಿಗುತ್ತವೆ. ಮಳೆಗಾಲದಲ್ಲಿ ಜಾಸ್ತಿ.

These water skippers are very busy creatures that live in the wells, ponds. They are quite common during monsoon. They are called ‘Jesus bugs’ as well.

ಕೆಂದಲೆ ಗಿಳಿ Plum-headed parakeets

ಕೆಂದಲೆ ಗಿಳಿ Plum-headed parakeets

ಭತ್ತದ ಕದಿರು ತಿನ್ನಲು ಬರುವ ಕೆಂದಲೆ ಗಿಳಿಗಳನ್ನು ನೋಡಲು ಬಹಳ ಸುಂದರ. ಮಳೆಗಾಲದಲ್ಲಿ ನೋಡಲು ಸಿಗುವುದು ಜಾಸ್ತಿ. ಗಂಡು ಮತ್ತು ಹೆಣ್ಣು ಗಿಳಿಗಳ ಬಣ್ಣ ಬೇರೆ ಬೇರೆ.

These parakeets are very pretty! But they will steal rice grains as shown in the picture. They are common during monsoon season.

ಕೆನ್ನೀಲಿ ಬಕ Purple Heron

ಕೆನ್ನೀಲಿ ಬಕ Purple Heron

ಉದ್ದ ಕುತ್ತಿಗೆಯ ಈ ಬಕಗಳನ್ನು ಗುರುತಿಸುವುದು ಬಹಳ ಸುಲಭ. ಮಳೆಗಾಲದಲ್ಲಿ ಜಾಸ್ತಿ. ಕಪ್ಪೆ, ಚಿಕ್ಕ ಹಾವುಗಳನ್ನು ತಿನ್ನುತ್ತವೆ. ಇವು ನಿಧಾನವಾಗಿ ರೆಕ್ಕೆ ಬಡಿದು ಹಾರುವುದು ನೋಡಲು ಸುಂದರ.

These long necked herons are easy to spot. Found in many numbers during monsoon. They eat frogs, small snakes. They have a beautiful flying pattern. Typically aren’t shy of humans.

ಚಿಟ್ಟುಗೂಬೆ Spotted Owlet

ಚಿಟ್ಟುಗೂಬೆ Spotted Owlet

ಮುದ್ದಾದ ಈ ಗೂಬೆಗಳು ಹಗಲು ಹೊತ್ತಿನಲ್ಲಿ ನೋಡಲು ಸಿಗುವುದು ಅಪರೂಪ. ಸಂಜೆ ಮತ್ತು ಮುಂಜಾನೆಯಲ್ಲಿ ಹೆಚ್ಚಾಗಿ ಚಟುವಟಿಕೆಯಿಂದಿರುವ ಈ ಹಕ್ಕಿಗಳನ್ನು ಹಾಲಕ್ಕಿ ಎಂದೂ ಕರೆಯುತ್ತಾರೆ.

These cute little owlets are hard to spot during the day. They are busy during late evening and early morning. They are in many numbers here, albeit hard to spot.

ಬಿಳಿಪೃಷ್ಠದ ರಾಟವಾಳ White-rumped Munia

ಬಿಳಿಪೃಷ್ಠದ ರಾಟವಾಳ White-rumped Munia

ಚಿಕ್ಕ ಗಾತ್ರದ ಈ ಹಕ್ಕಿಗಳು ವರ್ಷದ ಎಲ್ಲ ಸಮಯದಲ್ಲಿ ನೋಡಲು ಸಿಗುತ್ತವೆ. ಗುಂಪು ಗುಂಪಾಗಿ ಆಹಾರ ಅರಸುವ ಈ ಹಕ್ಕಿಗಳು ನೋಡಲು ಸುಂದರ. ಮಳೆಗಾಲದಲ್ಲಿ ಇವುಗಳ ಚಟುವಟಿಕೆ ಜಾಸ್ತಿ. 

These munia are found all year around here, although easy to spot them during monsoon. They typically forage in smaller groups.

ಉಡ Monitor lizard

ಉಡ Monitor lizard

6-8 ಅಡಿ ಉದ್ದಕ್ಕೆ ಬೆಳೆಯುವ ಈ ಉಡಗಳು ನೋಡಲು ಸಿಗುವುದು ಕಡಿಮೆ. ದೇವಸ್ಥಾನದ ಹತ್ತಿರ ಇರುವ ವನದಲ್ಲಿ ನೋಡಲು ಸಿಕ್ಕಿತ್ತು. ಅವುಗಳ ಆಹಾರ, ಮತ್ತಿತರ ಚಟುವಟಿಕೆಗಳ ಬಗ್ಗೆ ನನಗೆ ಏನು ತಿಳಿದಿಲ್ಲ!

These lizards can grow more than 4-6 feet and they are a rare sight. I have no clue what they eat, where do they spend their time! But they are fearsome to look at.

 ಮಲೆ ದಾಸ ಮುಂಗಟ್ಟೆ Malabar pied hornbill

ಮಲೆ ದಾಸ ಮುಂಗಟ್ಟೆ Malabar pied hornbill

ಮೊದಲ ಬಾರಿಗೆ ನೋಡಿದಾಗ ನಂಬಲು ಆಗದಂತ ದೊಡ್ಡ ಗಾತ್ರದ ಈ ಮಂಗಟ್ಟೆ ಹಕ್ಕಿಗಳು ಹಾರುವುದು ನೋಡಲು ಸುಂದರ. ಮನೆಯ ಬಳಿ ಪೇರಳೆ ಹಣ್ಣು ತಿನ್ನಲು ಬರುವುದೂ ಉಂಟು. 

The size of these hornbills are a bit of surprise for the first time viewer! They are big birds with weird looking big beaks. Its a sight to behold to see them flying slowly.

ನವಿಲು Indian Peacock

ನವಿಲು Indian Peacock

ಕೆಂಪು ಬಾಲದ ಪಿಕಳಾರ Red-vented Bulbul

ಕೆಂಪು ಬಾಲದ ಪಿಕಳಾರ Red-vented Bulbul

ಗುಂಡ್ಮಿಯಲ್ಲಿ ಎರಡು ಜಾತಿಯ ಬುಲ್ ಬುಲ್ ಹಕ್ಕಿಗಳಿವೆ. ಕೆಂಪು ಬಾಲದ ಬುಲ್ ಬುಲ್ ನೋಡಲು ಸಿಗುವುದು ಕಡಿಮೆ. ದಟ್ಟವಾದ ಪೊದೆಗಳಲ್ಲಿ ಗಿಡಗಳಲ್ಲಿ ಕುಳಿತಿರುತ್ತವೆ.

Out of 2 types of bulbuls that I’ve seen in Gundmi, these ones are hard to spot. Typically found on dense bushes and plants.

ಮುಂಗಸಿ Indian Grey Mongoose

ಮುಂಗಸಿ Indian Grey Mongoose

ಮುಂಗುಸಿಗಳು ಗುಂಡ್ಮಿಯಲ್ಲಿ ಬಹಳ. ಮಾನವರನ್ನು ನೋಡಿ ಹೆದರದ ಈ ಪ್ರಾಣಿಗಳು ಗದ್ದೆ, ತೋಟಗಳಲ್ಲಿ ಆಹಾರ ಹುಡುಕುತ್ತವೆ. ವರ್ಷದ ಎಲ್ಲಾ ಸಮಯದಲ್ಲೂ ನೋಡಲು ಸಿಗುತ್ತವೆ.

Mongooses are very common here in Gundmi. They, found either in single or a group of 2-4, typically forage garden, paddy fields.

ಹಸಿರು ಕಳ್ಳಿಪೀರ Green Bee-eater

ಹಸಿರು ಕಳ್ಳಿಪೀರ Green Bee-eater

ಈ ಸುಂದರ ಹಸಿರು ಬಣ್ಣದ ಹಕ್ಕಿಗಳು ವರ್ಷದ ಎಲ್ಲಾ ಕಾಲದಲ್ಲೂ ನೋಡಲು ಸಿಗುತ್ತವೆ. ಚುರುಕಾಗಿ ಅತ್ತಿತ್ತ ಹಾರಿ ನೊಣ, ಕೀಟಗಳನ್ನು ಹಿಡಿಯುತ್ತವೆ. 2-3 ಜಾತಿಗಳಿದ್ದು ಗುಂಡ್ಮಿಗೆ ವಲಸೆಯೂ ಬರುತ್ತವೆ. 

These quick birds are found in many number all year around. There are 2-3 species of bee-eaters in Gundmi, including the one that migrate during winter.

ಬೂದು ಬಕ Grey Heron

ಬೂದು ಬಕ Grey Heron

ಗುಂಡ್ಮಿಯಲ್ಲಿ ಬೂದು ಬಕಗಳು ಬಹಳ ಕಡಿಮೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತವೆ. ಗದ್ದೆಗಳಲ್ಲಿ ಓಡಾಡಿ ಆಹಾರ ಹುಡಕುವ ಈ ಉದ್ದದ ಹಕ್ಕಿಗಳು ಹಾರುವುದು ನೋಡಲು ಬಹಳ ಸುಂದರ.

Grey Herons aren’t found in many numbers. These monsoon visitors typically spend their time in paddy field searching for a meal. They can be easily spotted.

ದಸ್ಕತ್ ಜೇಡ Signature Spider

ದಸ್ಕತ್ ಜೇಡ Signature Spider

ಅನೇಕ ಜಾತಿಗಳಲ್ಲಿ ಕಾಣಸಿಗುವ ಜೇಡಗಳಲ್ಲಿ ಇದೂ ಒಂದು. ಸುಂದರವಾಗಿ ಬಲೆ ಕಟ್ಟುವ ಈ ಜೇಡಗಳು ತೋಟಗಳಲ್ಲಿ ನೋಡಲು ಸಿಗುತ್ತವೆ. ಇದು ದೊಡ್ಡ ಗಾತ್ರದ ಜೇಡ.

These spiders with their unique web design are found around the garden. They can get quite big, for a spider.

ಪಚ್ಚೆ ಕಣಜ / Emerald cockroach wasp

ಪಚ್ಚೆ ಕಣಜ / Emerald cockroach wasp

ಇದು ಅತ್ಯಂತ ಆಕರ್ಷಕ ಕೀಟ ವರ್ತನೆಯಾಗಿದೆ: ಈ ಜಾತಿಗಳ ಹೆಣ್ಣು ಕಣಜಗಳು ಜಿರಲೆನ್ನು ಎರಡು ಬಾರಿ ಕಡಿದು ವಿಷವನ್ನು ತಲುಪಿಸುತ್ತವೆ. ಜಿರಲೆ ತನ್ನ ಚಲಿಸುವ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಕಣಜವು ತನ್ನ ಗೂಡಿಗೆ ಎಳೆದುಕೊಂಡು ಹೋಗಿ, ಇದರ ದೇಹದಲ್ಲಿ ಮೊಟ್ಟೆ ಇಡುವುದು. ಮರಿ ಹುಳವು ಜಿರಲೆಯನ್ನೇ ತಿಂದು ದೊಡ್ಡದಾಗುತ್ತವೆ! ಇದರ ಬಗ್ಗೆ ಜಾಸ್ತಿ ತಿಳಿಯಿರಿ

This is a very fascinating insect behaviour: female wasps of this species sting a cockroach twice, delivering venom. Wasp stings precisely, to paralyse the cockroach and controls the escape reflex of the cockroach. Then the wasp leads the victim to the wasp's burrow and lays egg. The larvae would use the cockroach as food and shelter! Read more here

ಹುಂಡುಕೋಳಿ White-breasted Waterhen

ಹುಂಡುಕೋಳಿ White-breasted Waterhen

ಈ ಹುಂಡುಕೋಳಿಯ ಕಾಲಿನಲ್ಲಿ ಸಿಕ್ಕಿಕೊಂಡಿರುವ ಪ್ಲಾಸ್ಟಿಕ್ ನೋಡಿ. ಈ ಪ್ಲಾಸ್ಟಿಕ್ ದಾರ ಹಕ್ಕಿಗೆ ನಡೆಯಲು ಬಹಳ ಕಷ್ಟ ಕೊಡುತ್ತಿತ್ತು. ನಮ್ಮ ಅತಿಯಾದ ಪ್ಲಾಸ್ಟಿಕ್ ಬಳಕೆ ಮತ್ತು ಅಸಡ್ಡೆಯ ತ್ಯಾಜ್ಯ ನಿರ್ವಹಣೆ ಪರಿಸರವನ್ನು ಕಸದ ಡಬ್ಬಿಯಾಗಿ ಮಾಡಿದೆ. 

Notice the plastic string wrapped tightly around the hen’s leg. When I last saw that bird, it was struggling to walk properly. Our senseless overconsumption and careless attitude towards recycling has turned even the most unsuspecting corners of the world into a trash can.

ಮಧ್ಯಮ ಬೆಳ್ಳಕ್ಕಿ  Intermediate Egret

ಮಧ್ಯಮ ಬೆಳ್ಳಕ್ಕಿ Intermediate Egret

ಗುಂಡ್ಮಿಯಲ್ಲಿ ಕೊಕ್ಕರೆಗಳು ಸಾವಿರಾರು. ವರ್ಷದ ಎಲ್ಲ ಸಮಯದಲ್ಲಿ ಕಾಣಸಿಗುವ ಈ ಬಿಳಿ ಬಣ್ಣದ ಹಕ್ಕಿಗಳು, ಮಳೆಗಾಲದಲ್ಲಿ ರೈತರ ಬೆನ್ನ ಹಿಂದೆ ಓಡಾಡುತ್ತವೆ. ಕೊಕ್ಕರೆಗಳಲ್ಲಿ ೪-೫ ವಿಧಗಳಿದ್ದು ಈ ಉದ್ದ ಕತ್ತಿನ ಕೊಕ್ಕರೆಗಳು ಮಳೆಗಾಲದಲ್ಲಿ ಸುಲಭವಾಗಿ ನೋಡಲು ಸಿಗುತ್ತವೆ.

During Monsoon, there are thousands of Egrets here in Gundmi. They are friends of farmers, they don’t mind being at the close proximity to paddy field workers.

ಎಳೆ ಉಡ Young Monitor lizard

ಎಳೆ ಉಡ Young Monitor lizard

ಎಳೆ ಉಡಗಳು ವರ್ಣಮಯವಾಗಿವೆ. ದೇಹದ ಮೇಲೆ ಚುಕ್ಕೆ ಚುಕ್ಕೆಗಳಿದ್ದು, ಬಾಲವು ಉಳಿದ ದೇಹಕ್ಕಿಂತ ಎರಡರಷ್ಟು ಉದ್ದ ಇರುತ್ತದೆ. ನೋಡಲು ಸಿಗುವುದು ಅಪರೂಪ.

Young monitor lizards are very pretty. They have colourful spots and patterns. Hard to spot, but easy to identify.

ಕಬ್ಬೆಕ್ಕು/ಕಾಡು ಬೆಕ್ಕು Asian palm civet

ಕಬ್ಬೆಕ್ಕು/ಕಾಡು ಬೆಕ್ಕು Asian palm civet

ಹೆಸರು ಕಾಡು ಬೆಕ್ಕು ಎಂದಿದ್ದರೂ ಇವು ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಲ್ಲ. ರಾತ್ರಿಯಲ್ಲಿ ಕೆಲವೇ ಬಾರಿ ನೋಡಲು ಸಿಕ್ಕಿದ್ದ ಈ ನಿಶಾಚರಿಗಳು ನೋಡಲು ಮುಂಗುಸಿಯಂತೆ ಇರುತ್ತವೆ. ತೆಂಗಿನ ಮರಗಳನ್ನು ಸುಲಭವಾಗಿ ಹತ್ತುವ ಈ ಪ್ರಾಣಿಗಳ ಬಾಲ ಬಹಳ ಉದ್ದ. 

These palm civets are nocturnal and hard to spot. I’ve seen these mongoose-like creatures only few times. They can climb trees very easily. This picture is taken very late in the night, with the help of handheld torch in one hand and a heavy camera on other!